ಬನ್ನಿ ನಾವೆಲ್ಲರು ಗಂಧದ ಗಿಡಗಳನ್ನು ನೆಡುವ ಮೂಲಕ ಶ್ರೀಗಂಧದ ನಾಡನ್ನು ಕಟ್ಟೋಣ.

ಬನ್ನಿ ನಾವೆಲ್ಲರು ಗಂಧದ ಗಿಡಗಳನ್ನು ನೆಡುವ ಮೂಲಕ ಶ್ರೀಗಂಧದ ನಾಡನ್ನು ಕಟ್ಟೋಣ.
ಚಂದ್ರಶೇಖರ .ಆರ್ .ಎಸ್ - ಬಿ.ಇ, ಎಂ.ಬಿ.ಎ
ಕನ್ನಡ ಮತ್ತು ಪರಿಸರ ಪ್ರೇಮಿ , ರಾಜ್ಯ ಪ್ರಶಸ್ತಿ ವಿಜೇತರು,
ಪುನೀತ ಪರ್ವ ಪ್ರಶಸ್ತಿ, ಕನ್ನಡ ಕಣ್ಮಣಿ ಪ್ರಶಸ್ತಿ ಪುರಸ್ಕೃತರು ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಸನ್ಮಾನಿತರು.
ಶ್ರೀ ಚಂದ್ರಶೇಖರ್ ರವರು ಎಂ.ಎನ್.ಸಿ ಕಂಪನಿಯಲ್ಲಿ ಅಸೋಸಿಯೇಟ್ ವೈಸ್ ಪ್ರೆಸಿಡೆಂಟ್ ಆಗಿದ್ದು ಸಾಹಿತ್ಯಾಸಕ್ತಿಯನ್ನು ಹಾಗೂ ಪರಿಸರ ಪ್ರೇಮವನ್ನು ಬೆಳೆಸಿಕೊಂಡಿದ್ದಾರೆ.
ಇಂಜಿನಿಯರಿಂಗ್ ಮತ್ತು ಎಂ.ಬಿ.ಎ ಪದವಿಯನ್ನು ಪಡೆದಿರುವ ಇವರು ಹಲವಾರು ಪುಸ್ತಕಗಳನ್ನು ಹಾಗೂ ಕವನಗಳನ್ನು ರಚಿಸಿದ್ದಾರೆ. ಇವರು ಆರು ವರ್ಷಗಳ ಕಾಲ ಅಮೆರಿಕ ಮತ್ತು ಜರ್ಮನಿಯಲ್ಲಿ ಕೆಲಸ ಮಾಡಿದ್ದಾರೆ ಹಾಗೂ ಹೊರದೇಶದಲ್ಲಿ ಕನ್ನಡದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಕನ್ನಡ ಸಂಸ್ಕೃತಿಯನ್ನು ಉಳಿಸುವ ಸಲುವಾಗಿ ಹೋರಾಡುತ್ತಿದ್ದಾರೆ.
ಇವರ ಡಿಜಿಟಲೀಕರಣದ ಸಂಶೋಧನೆಗಳಿಗಾಗಿ 2013 ಹಾಗೂ 2014ರಲ್ಲಿ ವರ್ಷದ ಸಂಶೋಧಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರಿಗೆ ಅನೇಕ ಪೇಟೆಂಟ್ ಗಳು ದೊರೆತಿವೆ. ಇವರ ಸಂಶೋಧನೆಗಳನ್ನು ಗುರುತಿಸಿ ಡಾ. ಎಪಿಜೆ ಅಬ್ದುಲ್ ಕಲಾಂ ಆವಿಷ್ಕಾರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕನ್ನಡ ಹಾಗೂ ಪರಿಸರದ ಮೇಲೆ ಅಪಾರ ಪ್ರೀತಿ ಮತ್ತು ಕಾಳಜಿಯನ್ನು ಹೊಂದಿರುವ ಇವರು ಕನ್ನಡ ನಾಡು ಶ್ರೀಗಂಧದ ಬೀಡು ಎಂಬ ಕಾರ್ಯಕ್ರಮದ ಮೂಲಕ ಶ್ರೀಗಂಧದ ಗಿಡಗಳನ್ನು ಬೆಂಗಳೂರಿನ ಹಲವಾರು ಶಾಲಾ ಕಾಲೇಜುಗಳು ಆಸ್ಪತ್ರೆಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿ ನೆಟ್ಟಿದ್ದಾರೆ. ಇವರು ಗೋವಾ, ಹೈದರಾಬಾದ್, ಒಡಿಶಾ, ರಾಜಸ್ಥಾನ, ಹರಿಯಾಣ, ಮುಂಬೈ, ಕರ್ನಾಟಕ, ಮುಂತಾದ ರಾಜ್ಯಗಳಲ್ಲಿ ಮರಗಳನ್ನು ನೆಟ್ಟಿದ್ದಾರೆ. ಅಳಿವಿನಂಚಿನಲ್ಲಿರುವ ಶ್ರೀಗಂಧದ ಗಿಡಗಳನ್ನು ಉಳಿಸುವ ಸಲುವಾಗಿ ಇವರು ಒಂದು ಲಕ್ಷ ಶ್ರೀಗಂಧದ ಗಿಡಗಳನ್ನು ನೆಡುವ ಯೋಜನೆಯನ್ನು ರೂಪಿಸಿದ್ದಾರೆ. ಶ್ರೀಗಂಧದ ಮರಗಳ ಅರಿವನ್ನು ಮೂಡಿಸಲು ಎಲ್ಲಾ ಪರಿಸರ ಪ್ರೇಮಿಗಳಿಗೆ ಕನ್ನಡ ನಾಡು ಶ್ರೀಗಂಧದ ಬೀಡು ಪುಸ್ತಕವನ್ನು ಅರ್ಪಿಸಿದ್ದಾರೆ.
ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು ಬಡ ಮಕ್ಕಳಿಗೆ ಪುಸ್ತಕ ಹಾಗೂ ಬ್ಯಾಗ್ ಗಳನ್ನು ವಿತರಿಸುವಂತಹ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಇವರ ಧರ್ಮಪತ್ನಿ ಮಧುರ ಚಂದ್ರಶೇಖರ್ ರವರು ಕನ್ನಡ ಸೇವೆ ಮತ್ತು ಗಿಡ ನೆಡುವ ಕಾರ್ಯಕ್ರಮಗಳಲ್ಲಿ ಇವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.
ಬನ್ನಿ ನಾವೆಲ್ಲರು ಗಂಧದ ಗಿಡಗಳನ್ನು ನೆಡುವ ಮೂಲಕ ಶ್ರೀಗಂಧದ ನಾಡನ್ನು ಕಟ್ಟೋಣ.
ಮಧುರ ಎಂ, ಬಿ ಎಸ್ ಸಿ, ಎಂಬಿಎ
ಲೇಖಕಿ ಮತ್ತು ಪರಿಸರ ಪ್ರೇಮಿ
ಶ್ರೀಮತಿ ಮಧುರ ಚಂದ್ರಶೇಖರ್ ಅವರು ಲೇಖಕಿಯಾಗಿದ್ದು ಮಕ್ಕಳಿಗಾಗಿ "ಪುಟಾಣಿ ಮಕ್ಕಳ ನೀತಿ ಕಥೆಗಳು" ಎಂಬ ಪುಸ್ತಕವನ್ನು ಬರೆದಿದ್ದಾರೆ. ಇವರು ಜರ್ಮನಿಯಲ್ಲಿದ್ದಾಗ ಮಕ್ಕಳಿಗಾಗಿ ಕನ್ನಡವನ್ನು ಕಲಿಸುವ ಸಲುವಾಗಿ ಭಾರತಕ್ಕೆ ಬಂದ ಸಂದರ್ಭದಲ್ಲಿ ಕಥೆ ಪುಸ್ತಕಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಹೀಗೆ ಪ್ರಾರಂಭವಾದ ಕನ್ನಡದ ಒಲವು ಮತ್ತು ಸಾಹಿತ್ಯ ಆಸಕ್ತಿಯನ್ನು ಬೆಳೆಸಿಕೊಂಡರು. ಜ್ಞಾನಪೀಠ ಪ್ರಶಸ್ತಿ ವಿಜೇತರುಗಳ ಸಾಹಿತ್ಯವನ್ನು ಓದಿಕೊಂಡು ಯೂಟ್ಯೂಬ್ ನ ಮುಖಾಂತರ ವಿಡಿಯೋಗಳನ್ನು ಮಾಡಿ ಜನರಿಗೆ ಪರಿಚಯಿಸಿದರು. ಇವರಿಗೆ ಕುವೆಂಪು ಶ್ರೀ ಪ್ರಶಸ್ತಿ , ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಶಸ್ತಿ ಮತ್ತು ಕರುನಾಡ ಸೇವಕರು ಪ್ರಶಸ್ತಿ ಲಭಿಸಿದೆ. ಇವರ ಪತಿ ಚಂದ್ರಶೇಖರ್ ಅವರ ಜೊತೆ ಸೇರಿ "ಕನ್ನಡ ನಾಡು ಶ್ರೀಗಂಧದ ಬೀಡು" ಎಂಬ ಶೀರ್ಷಿಕೆಡಿ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ, ಕಚೇರಿಗಳಲ್ಲಿ, ಗಿಡಗಳನ್ನು ನೆಡುವ ಕೆಲಸದಲ್ಲಿ ಕೈಜೋಡಿಸಿದ್ದಾರೆ. ಹಲವು ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣ ಜೊತೆಗೆ ಜೀವನದ ಮೌಲ್ಯಗಳನ್ನು ತಿಳಿಸುವ ಸಲುವಾಗಿ ಮಕ್ಕಳಿಗೆ ನೀತಿ ಕಥೆಗಳ ಮೂಲಕ ಮಕ್ಕಳಿಗೆ ಬೋಧಿಸುತ್ತಿದ್ದಾರೆ.
ನಮನ ಕಲಾ ಮಂಟಪ ಮೈಸೂರಿನಲ್ಲಿ ನಡೆದ ಅಭಿರುಚಿ ಕಲಾ ಬಳಗದ ಕಾರ್ಯಕ್ರಮದಲ್ಲಿ N V ರಮೇಶ್ ರವರು (ಆಕಾಶವಾಣಿ) ಬರೆದಿರುವ ಸಮಗ್ರ ಪ್ರವಾಸ ಸಾಹಿತ್ಯ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು
ಅಭೀ ಪ್ರಕೃತಿ ವಿಲ್ಲಾ ಚಂದಾಪುರ ಬೆಂಗಳೂರಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ 2024
We use cookies to analyze website traffic and optimize your website experience. By accepting our use of cookies, your data will be aggregated with all other user data.